ನರೇಂದ್ರ ಮೋದಿ ಎಂ ಕರುಣಾನಿಧಿ ಭೇಟಿ | ಇದರ ಹಿಂದಿನ ಉದ್ದೇಶ? | Oneindia Kannada

2017-11-08 4,313

Prime Minister Narendra Modi sprang a surprise by calling on ailing DMK chief M Karunanidhi on Monday and inviting him to stay at his official residence in New Delhi to take rest. The meeting of the political adversaries, more importantly between Modi and DMK working president M K Stalin, triggered speculation.

ಮೋದಿ ಬಿಟ್ಟ ಬಾಣಕ್ಕೆ ತಮಿಳುನಾಡಿನ ರಾಜಕಾರಣದಲ್ಲಿ ಬಿದ್ದ ಹಕ್ಕಿಗಳೆಷ್ಟು! ರಾಜಕಾರಣದ ಮಗ್ಗುಲು ಹೇಗೆಲ್ಲ ಬದಲಾಗುತ್ತವೆ ಅನ್ನೋದಿಕ್ಕೆ ಪ್ರಧಾನಿ ಮೋದಿಯ ಚೆನ್ನೈ ಭೇಟಿ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇನ್ನೇನು ನಾಳೆ ಬೆಳಗಾದರೆ ಡಿಎಂಕೆ ರಸ್ತೆಗಿಳಿದು ಅಪನಗದೀಕರಣದ ವಿರುದ್ಧ ಹೋರಾಟ ನಡೆಸಬೇಕಿತ್ತು. ಆದರೆ ಈಗ ಪ್ರತಿಭಟನೆಯಿಂದ ಹಿಂದೆ ಸರಿದಿದೆ. ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರನ್ನು ಭೇಟಿ ಮಾಡಿದ ಮೋದಿ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅದೂ 2ಜಿ ಹಗರಣದ ತೀರ್ಪಿನ ದಿನಾಂಕ ಕೋರ್ಟ್ ನಿಂದ ಪ್ರಕಟವಾಗಲು ಒಂದು ದಿನ ಬಾಕಿ ಇರುವಂತೆ ಆದ ಈ ಭೇಟಿ ಕುತೂಹಲಕ್ಕೆ ಕಾರಣವಾಗಿತ್ತು.ಆದರೆ, ಕೋರ್ಟ್ ತೀರ್ಪಿನ ದಿನಾಂಕ ಪ್ರಕಟ ಆಗುವುದಕ್ಕೂ, ಮೋದಿ ಭೇಟಿಗೂ ಕಾಕತಾಳೀಯ ಸಂಬಂಧವೇ ಇರಬಹುದು. ರಾಜಕಾರಣದ ದೃಷ್ಟಿಯಿಂದ ಮಹತ್ವ ಪಡೆದದ್ದಂತೂ ದಿಟ. ಇದು ಕೇವಲ ಔಪಚಾರಿಕ ಭೇಟಿ. ಇಲ್ಲಿ ರಾಜಕೀಯ ಏನೂ ಇಲ್ಲ ಎಂಬ ಮಾತು ಕೇಳಿಬರುತ್ತಿದೆಯಾದರೂ ಇಬ್ಬರು ಪಳಗಿದ ರಾಜಕಾರಣಿಗಳ ಭೇಟಿಯೇ ಹಲವು ವಿಷಯವನ್ನು ಅರ್ಥ ಮಾಡಿಸುತ್ತದೆ.

Videos similaires